ಕಾಲೇಜಿನ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾವೇರಿ ಪರಿಸರ ಸಂರಕ್ಷಣಾ ಬಳಗ ಸಂಚಾಲಕರಾದ ಚಂದ್ರಮೋಹನ್ ಎಂ ಎನ್ ಮಾತನಾಡಿ ಬಳಗದ ಮೂಲಕ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಗಿಡವನ್ನು ನೀಡುತ್ತಿದ್ದು, ಗಿಡವನ್ನು ವಿದ್ಯಾರ್ಥಿಗಳು ಅವರ ತಾಯಿ ಹೆಸರಿನಲ್ಲಿ ನೆಟ್ಟು ನಿರ್ವಹಣೆ ಮಾಡುವ ಯೋಜನೆ ಇದಾಗಿದೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಪ್ರಮುಖ ಉದ್ದೇಶ ಹೊಂದಲಾಗಿದೆ ಎಂದರು.
ಪ್ರತಿ ವಿದ್ಯಾರ್ಥಿಗಳು ತಾವು ನೆಟ್ಟು ಬೆಳೆಸಿದ ಗಿಡದ ಚಿತ್ರವನ್ನು ಸಂಬಂಧಿಸಿದ ವಾಟ್ಸಾಪ್ ಗುಂಪಿಗೆ ಕಳುಹಿಸಿ ಕೊಡುವುದು. ವಾರ್ಷಿಕವಾಗಿ ಉತ್ತಮವಾಗಿ ನಿರ್ವಹಣೆ ಮಾಡಿದ ಗಿಡಗಳನ್ನು ಬೆಳೆಸಿದ ವಿದ್ಯಾರ್ಥಿಗಳಿಗೆ ವೃಕ್ಷಮಾತೆ ಡಾ ಸಾಲುಮರ ತಿಮ್ಮಕ್ಕ ಅವರ ಹೆಸರಿನಲ್ಲಿ ವಾರ್ಷಿಕ ಪ್ರಶಸ್ತಿ ಮತ್ತು ನಗದು ಬಹುಮಾನ ಮತ್ತು ಬಳಗದಿಂದ ಪ್ರಮಾಣ ಪತ್ರ ನೀಡುವ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಈ ಸಂದರ್ಭ ಮಾತನಾಡಿದ ಪ್ರಾಂಶುಪಾಲರಾದ ಫಾದರ್ ಟಿಟ್ಟೋ ಥಾಮಸ್ ಅಭಿಯಾನಕ್ಕೆ ಶುಭ ಕೋರಿದರು.
ಭಾರತ ಮಾತಾ ವಿದ್ಯಾಸಂಸ್ಥೆಗಳ ಆಡಳಿತ ಅಧಿಕಾರಿ ಫಾ. ಪ್ರದೀಶ್ ವಿದ್ಯಾರ್ಥಿಗಳಿಗೆ ಮತ್ತು ಕಾಲೇಜಿನ ಪ್ರಾಧ್ಯಾಪಕರಿಗೆ ಗಿಡಗಳನ್ನು ವಿತರಣೆ ಮಾಡಿದರು.
ಈ ಸಂದರ್ಭ ಬಳಗದ ಪ್ರಮುಖರಾದ ವನಿತಾ ಚಂದ್ರಮೋಹನ್, ಧರಣಿ ಸೋಮಣ್ಣ, ಭೋಜಣ್ಣ ರೆಡ್ಡಿ, ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ದಿನೇಶ್, ಪ್ರಾಧ್ಯಾಪಕರು ವಿದ್ಯಾರ್ಥಿಗಳು ಇದ್ದರು.