ಕುಶಾಲನಗರ ತಾಲೂಕು ಬ್ಯೂಟಿಷಿಯನ್ ಅಸೋಸಿಯೇಷನ್ ವತಿಯಿಂದ ತರಬೇತಿ ಕಾರ್ಯಾಗಾರವು ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.
ಸಂಘದ ಗೌರವಾಧ್ಯಕ್ಷೆ ವನಿತಾ ಚಂದ್ರಮೋಹನ್ ಅವರು ಕಾರ್ಯಾಗಾರವನ್ನು ಉದ್ಘಾಟಿಸಿದರು. ಯೂತಿಕಾ ಕಂಪನಿಯ ಏರಿಯಾ ಮ್ಯಾನೇಜರ್ ಪ್ರಕಾಶ್, ಮೋಹನ್ ಹಾಗೂ ಕಿರಣ್ ಅವರು ಹೇರ್ ಕಲರ್ ಥಿಯರಿ, ಹೇರ್ ಹೈಲೈಟ್ಸ್, ರೂಟ್ ಟಚ್‌ಅಪ್ ಮತ್ತು ಗ್ಲೋಬಲ್ ಕಲರ್ಸ್ ಕುರಿತು ತರಬೇತಿ ನೀಡಿದರು.
ಬಯೋಸಾಫ್ಟ್ ಕಂಪನಿಯ ತಾಂತ್ರಿಕ ತರಬೇತುದಾರರಾದ ನಳಿನಿ ಮತ್ತು ರಮ್ಯಾ ಅವರು ವಿವಿಧ ಬಗೆಯ ಹ್ಯಾಂಡ್ ವ್ಯಾಕ್ಸಿಂಗ್ ಕುರಿತು ಮಾಹಿತಿ ಹಾಗೂ ತರಬೇತಿ ನೀಡಿದರು.
ಈ ಕಾರ್ಯಾಗಾರದಲ್ಲಿ ಕೊಡಗು ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಂದ 76 ಮಂದಿ ಭಾಗವಹಿಸಿ ಕಾರ್ಯಗಾರದ ಪ್ರಯೋಜನ ಪಡೆದುಕೊಂಡು ಪ್ರಮಾಣಪತ್ರಗಳನ್ನು ಪಡೆದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷೆ ನಾಗಮಣಿ, ಪ್ರಧಾನ ಕಾರ್ಯದರ್ಶಿ ನವ್ಯ, ಕಾರ್ಯದರ್ಶಿ ಮಧು , ಸಂಘಟನಾ ಕಾರ್ಯದರ್ಶಿ ತಾಜ್ ಮತ್ತು ತಾಲೂಕು ಸಂಘದ ನಿರ್ದೇಶಕರು, ತಾಲೂಕು ಸಂಘದ ಸದಸ್ಯರು ಉಪಸ್ಥಿತರಿದ್ದರು. ನಿರ್ದೇಶಕಿ ಹರಿಣಿ ಪ್ರಾರ್ಥಿಸಿ ಪ್ರಧಾನ ಕಾರ್ಯದರ್ಶಿ ನವ್ಯ ನಿರೂಪಿಸಿ ವಂದಿಸಿದರು